ಹರೇ ಕೃಷ್ಣ
ಬಂಧುಗಳೇ,
“न संरम्भॆण सिध्यन्ति सर्वॆ र्थाः सान्त्वया यथा”
ಎಂಬ ಭಾಗವತದ ಮಾತಿನಂತೆ ನಿಧಾನವಾಗಿ ಆಲೋಚಿಸಿ ನಮಗೆ ಇಷ್ಟವಾದ ಪ್ರಪಂಚಕ್ಕೆ ಒಳಿತಾಗುವ ಪ್ರಕೃತಿಗೆ ಭಾರವಾಗದ ಕ್ರಿಯೆಗಳು ನಮ್ಮ ಜೀವಿತಾವಧಿಯಲ್ಲಿ ನಾವು ನಡೆಸಬೇಕು. ಆಗ ಎಲ್ಲ ಅರ್ಥಗಳು ಸಿದ್ಧಿಸುತ್ತವೆ. ಪ್ರತಿ ಕ್ಷಣವನ್ನು ಆ ಮೂಲಕ ಆನಂದಿಸಬೇಕು.
ದೇಶದ ಅತ್ಯುನ್ನತ ಸ್ಥಾನಗಳನ್ನು ನೀವೆಲ್ಲರೂ ಅಲಂಕರಿಸಿ ನಮ್ಮ ಸಮಾಜದ ಏಳ್ಗೆಗಾಗಿ ಕರ್ತವ್ಯ ಪ್ರಜ್ಞೆಯನ್ನಿಟ್ಟುಕೊಂಡು ಬೆಳೆಯಬೇಕು, ದೇಶವನ್ನು ಬೆಳೆಸಬೇಕು.
ಅಧ್ಯಾತ್ಮ ಪ್ರಪಂಚದ ಒಳಗನ್ನು ಜೀವಿತಾವಧಿಯಲ್ಲಿ ನೋಡಲು ನಿರಂತರ ನೀವೆಲ್ಲರೂ ಪ್ರಯತ್ನಿಸಬೇಕೆಂಬುದು ನಮ್ಮ ಆಶಯ.